Index   ವಚನ - 843    Search  
 
ನಿಮಿಷವಳಿದು ಅನಿಮಿಷನಾಗಿ ಅರಿದು ಮರೆದ ಅಪ್ರತಿಮ ಶರಣ ತಾನೆಂದು ಕಾರ್ಯ ಕಾರಣಕ್ಕನುಕೂಲಿಯಾದಡು ತಾ ಮಾಡಿದಡು, ತಾ ಸುಖಿಸಿದಡು, ತನ್ನ ವಿನೋದದಾನಂದದೊಳಗೆಯಲ್ಲದೆ ಅಣುಮಾತ್ರವಿಲ್ಲ ಕಾಣಾ, ತಾನೆಂತಿರ್ದಂತೆ ಗುರುನಿರಂಜನ ಚನ್ನಬಸವಲಿಂಗ ಕಾಣಾ.