ಅಖಂಡ ಜ್ಞಾನದೊಳಡಗಿರ್ದ ಸರ್ವಶೂನ್ಯಂಗೆ
ಭೇದವಮಾಡಿ ನುಡಿವ ಮಾಯೆಯೊಳಗಿಪ್ಪ
ಮನುಜರ ವಾಕ್ಪಟುತ್ವವಂತಿರಲಿ,
ಪ್ರಯೋಜನವಿಲ್ಲದ ಪ್ರಯೋಜನ ಯಾತಕ್ಕೆ ಪ್ರಯೋಜನ?
ಶೋಭನಮುಂದೆ ಬೊಗಳುವ ಶುನಕನ ಶಬ್ದವನರಿವರಾರು?
ಆ ಶರಣನೆಂದಿರ್ದಡು ಅಂತಿಲ್ಲ,
ರಸವಿಲ್ಲದ ನಾಲಿಗೆಯಂತೆ ರೂಪಿಲ್ಲದ ನೇತ್ರದಂತೆ
ಗಂಧವಿಲ್ಲದ ಘ್ರಾಣದಂತೆ ಇರ್ದ ಕಾಣಾ ಸಕಲರಲ್ಲಿಯೂ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
Art
Manuscript
Music
Courtesy:
Transliteration
Akhaṇḍa jñānadoḷaḍagirda sarvaśūn'yaṅge
bhēdavamāḍi nuḍiva māyeyoḷagippa
manujara vākpaṭutvavantirali,
prayōjanavillada prayōjana yātakke prayōjana?
Śōbhanamunde bogaḷuva śunakana śabdavanarivarāru?
Ā śaraṇanendirdaḍu antilla,
rasavillada nāligeyante rūpillada nētradante
gandhavillada ghrāṇadante irda kāṇā sakalaralliyū
guruniran̄jana cannabasavaliṅga nim'ma śaraṇa.