Index   ವಚನ - 844    Search  
 
ಅಖಂಡ ಜ್ಞಾನದೊಳಡಗಿರ್ದ ಸರ್ವಶೂನ್ಯಂಗೆ ಭೇದವಮಾಡಿ ನುಡಿವ ಮಾಯೆಯೊಳಗಿಪ್ಪ ಮನುಜರ ವಾಕ್ಪಟುತ್ವವಂತಿರಲಿ, ಪ್ರಯೋಜನವಿಲ್ಲದ ಪ್ರಯೋಜನ ಯಾತಕ್ಕೆ ಪ್ರಯೋಜನ? ಶೋಭನಮುಂದೆ ಬೊಗಳುವ ಶುನಕನ ಶಬ್ದವನರಿವರಾರು? ಆ ಶರಣನೆಂದಿರ್ದಡು ಅಂತಿಲ್ಲ, ರಸವಿಲ್ಲದ ನಾಲಿಗೆಯಂತೆ ರೂಪಿಲ್ಲದ ನೇತ್ರದಂತೆ ಗಂಧವಿಲ್ಲದ ಘ್ರಾಣದಂತೆ ಇರ್ದ ಕಾಣಾ ಸಕಲರಲ್ಲಿಯೂ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.