Index   ವಚನ - 847    Search  
 
ಆಚಾರಲಿಂಗದೊಳಗಿರ್ದು ಗಂಧವನರಿಯೆ, ಗುರುಲಿಂಗದೊಳಗಿರ್ದು ರುಚಿಯನರಿಯೆ, ಶಿವಲಿಂಗದೊಳಗಿರ್ದು ರೂಪವನರಿಯೆ, ಜಂಗಮಲಿಂಗದೊಳಗಿರ್ದು ಸೋಂಕವನರಿಯೆ, ಪ್ರಸಾದಲಿಂಗದೊಳಗಿರ್ದು ಶಬ್ದವನರಿಯೆ, ಮಹಾಲಿಂಗದೊಳಗಿರ್ದು ಪರಿಣಾಮವನರಿಯೆ, ಅದೇನುಕಾರಣವೆಂದೊಡೆ ಗುರುನಿರಂಜನ ಚನ್ನಬಸವಲಿಂಗ ತಾನಾದ ಕಾರಣ.