Index   ವಚನ - 851    Search  
 
ಆಚಾರಂಗವಾಗಿ ಶ್ರದ್ಧಾಭಕ್ತಿಯನರಿಯೆ. ಗುರ್ವಾಂಗವಾಗಿ ನಿಷ್ಠಾಭಕ್ತಿಯನರಿಯೆ. ಶಿವಾಂಗವಾಗಿ ಸಾವಧಾನಭಕ್ತಿಯನರಿಯೆ. ಚರಾಂಗವಾಗಿ ಅನುಭಾವಭಕ್ತಿಯನರಿಯೆ. ಶೇಷಾಂಗವಾಗಿ ಆನಂದಭಕ್ತಿಯನರಿಯೆ. ಪರಿಣಾಮಂಗವಾಗಿ ಸಮರಸಭಕ್ತಿಯನರಿಯೆ. ಗುರುನಿರಂಜನ ಚನ್ನಬಸವಲಿಂಗವಾಗಿ ಮಾಡಲರಿಯೆ.