Index   ವಚನ - 854    Search  
 
ಲಿಂಗದ ನಿಜವರಿದು ಮರೆದು ಮಾಡುವ ಭಕ್ತನಿಂಗಿತವನೇನೆಂಬೆನಯ್ಯಾ! ಕರ್ಮವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಮನವಿಲ್ಲದ ನೋಟ, ನೋಟವಿಲ್ಲದ ರುಚಿ, ರುಚಿಯಿಲ್ಲದ ಸೋಂಕು, ಸೋಂಕಿಲ್ಲದ ಸೊಮ್ಮು, ಸೊಮ್ಮುಯಿಲ್ಲದ ಸುಖ, ಸುಖವಿಲ್ಲದ ಶಬ್ದ, ಶಬ್ದವಿಲ್ಲದ ಗಂಧ, ಗಂಧವಿಲ್ಲದ ವಾಸನೆ, ವಾಸನೆಯಿಲ್ಲದ ಮಾಟ ಗುರುನಿರಂಜನ ಚನ್ನಬಸವಲಿಂಗದೊಳಗೆ ಕೂಟ.