Index   ವಚನ - 853    Search  
 
ಬೇರಿಲ್ಲದ ಲಿಂಗವ ಬೇರೆಮಾಡಿ ಪೂಜಿಸುವ ತನುಸಂಬಂಧಿಗಳನೇನೆಂಬೆನಯ್ಯಾ! ತನುಸಂಬಂಧವಾದಲ್ಲಿ ಮನವುಲಿವುದು, ಭಾವ ಬೆರೆಸುವದು, ಬೆಸಿಗೆ ಬಿಚ್ಚುವದು, ಗುರುನಿರಂಜನ ಚನ್ನಬಸವಲಿಂಗ ವೇಧಿಸದೆ ಭಕ್ತಿ ಇತ್ತರವಾಗಿಪ್ಪುದು.