Index   ವಚನ - 855    Search  
 
ಊರು ಕೆಟ್ಟುಹೋಗಿ ಕಲ್ಯಾಣ ಕೌಲು ನಿಂದಲ್ಲಿ, ಕೂಡಿದ ಸಂಪತ್ತು ಸಲ್ಲಲಿತದೊಳಿರ್ದೆನಯ್ಯಾ. ಎನ್ನ ಮಠಕ್ಕೆ ಬಂದ ಬಸವಣ್ಣನೊಂದು ಕೊಂಡ, ಮಡಿವಾಳಯ್ಯನೊಂದು ಕೊಂಡ, ಚನ್ನಬಸವಣ್ಣನೊಂದು ಕೊಂಡ, ಸಿದ್ಧರಾಮಯ್ಯ ನೊಂದು ಕೊಂಡ, ಉರಿಲಿಂಗಪೆದ್ದಣ್ಣನೊಂದು ಕೊಂಡ, ಅಜಗಣ್ಣನೊಂದು ಕೊಂಡ ಇಂತಾದಬಳಿಕ ಮುಂದೆ ಮುಕ್ತಾಯಿ ಇಲ್ಲ, ಮಹಾದೇವಿಯಕ್ಕನೊಳಗಡಗಿರ್ದೆನು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.