ಲಿಂಗದ ನಿಜವರಿದು ಮರೆದು ಮಾಡುವ
ಭಕ್ತನಿಂಗಿತವನೇನೆಂಬೆನಯ್ಯಾ!
ಕರ್ಮವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ,
ಮನವಿಲ್ಲದ ನೋಟ, ನೋಟವಿಲ್ಲದ ರುಚಿ, ರುಚಿಯಿಲ್ಲದ ಸೋಂಕು,
ಸೋಂಕಿಲ್ಲದ ಸೊಮ್ಮು, ಸೊಮ್ಮುಯಿಲ್ಲದ ಸುಖ, ಸುಖವಿಲ್ಲದ ಶಬ್ದ,
ಶಬ್ದವಿಲ್ಲದ ಗಂಧ, ಗಂಧವಿಲ್ಲದ ವಾಸನೆ, ವಾಸನೆಯಿಲ್ಲದ ಮಾಟ
ಗುರುನಿರಂಜನ ಚನ್ನಬಸವಲಿಂಗದೊಳಗೆ ಕೂಟ.
Art
Manuscript
Music
Courtesy:
Transliteration
Liṅgada nijavaridu maredu māḍuva
bhaktaniṅgitavanēnembenayyā!
Karmavillada kāya, kalpaneyillada mana,
manavillada nōṭa, nōṭavillada ruci, ruciyillada sōṅku,
sōṅkillada som'mu, som'muyillada sukha, sukhavillada śabda,
śabdavillada gandha, gandhavillada vāsane, vāsaneyillada māṭa
guruniran̄jana cannabasavaliṅgadoḷage kūṭa.