ನಾದ ಬಿಂದು ಕಲಾತೀತ ನಿರವಯಾನಂದ ನಿಜಬ್ರಹ್ಮವೇ
ತಾವೆಂದು ನುಡಿದುಕೊಂಡು
ಪರಧನಕ್ಕೆ ಆಶೆಯನಿಕ್ಕಿ, ಪರವಧುವಿಗೆ ಮನವನಿಕ್ಕಿ,
ಪರದೈವಕ್ಕೆ ಶಿರವ ಚಾಚುವ
ನಿರವಯಕ್ಕೆ ನಿರಂತರವಾದ ಮಾಯಾ ನಿರ್ಮಾಲ್ಯರಿಗೆ
ನಿಜಗುರುನಿರಂಜನ ಚನ್ನಬಸವಲಿಂಗದಲ್ಲಿ
ನಿರ್ವಯಲ ನಿಜಸಮಾಧಿಯು
ಎಂದೆಂದಿಗೆ ಎತ್ತಲೂ ಹೇಳಾ.
Art
Manuscript
Music
Courtesy:
Transliteration
Nāda bindu kalātīta niravayānanda nijabrahmavē
tāvendu nuḍidukoṇḍu
paradhanakke āśeyanikki, paravadhuvige manavanikki,
paradaivakke śirava cācuva
niravayakke nirantaravāda māyā nirmālyarige
nijaguruniran̄jana cannabasavaliṅgadalli
nirvayala nijasamādhiyu
endendige ettalū hēḷā.
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ