Index   ವಚನ - 868    Search  
 
ಕಾಯಕರ್ಮಕೂಟಿಗಳಿಗೆ ಕರ್ತುಗಳರಿವ ನಿಷ್ಠೆಯ ನಿರ್ಮಲಸುಖವೆಲ್ಲಿಹದೊ? ಮನದ ಮಾಯಾಕೂಟಿಗಳಿಗೆ ಮನದೊಡೆಯರನರಿವ ನಿಷ್ಠೆಯ ನಿಲುವಿನ ಸೊಬಗೆಲ್ಲಿಹದೊ? ಪ್ರಾಣನ ಸಂಚಲಸಂಯೋಗಿಗಳಿಗೆ ಪ್ರಾಣಲಿಂಗಸಂಬಂಧವನರಿವ ನಿಷ್ಠೆಯ ನಿಜಸುಖವೆಲ್ಲಿಹದೊ? ಭಾವದ ಭ್ರಾಂತಿಯೊಳ್ಮುಳುಗಿರ್ದ ತಾಮಸಪ್ರಾಣಿಗಳಿಗೆ ಗುರುನಿರಂಜನ ಚನ್ನಬಸವಲಿಂಗ ನಿಜೈಕ್ಯದ ನಿಸ್ಸೀಮ ಸುಖವೆಲ್ಲಿಹದೊ?