Index   ವಚನ - 876    Search  
 
ಲಿಂಗದಲ್ಲಿ ಬೆರಸಲನುಗೈದ ನಿಜಾನಂದ ಶರಣನ ಮುಂದೆ ಸುಳಿದಾಡುವ ಕರಣೇಂದ್ರಿಯ ವಿಷಯಾದಿ ಸಕಲಗುಣಂಗಳೆಲ್ಲ ಲಿಂಗಸಮರಸಾನುಭಾವವ ಹೊತ್ತು, ಹೊರಗೊಳಗೆ, ಹಿಂದೆ ಮುಂದೆ, ಮೇಲೆ ಕೆಳಗೆ ರೋಮರೋಮಂಗಳಲ್ಲಿ ಬಿರಿಮುಗುಳು ಬಿಚ್ಚಿ ಸೌರಭ ಅನಿಲ ನೆರೆದು ಸೂಸಿ ಆವರಿಸುವಂತೆ, ತಮ್ಮ ಸಮರಸದ ಸಮರತಿಯೊಳೊಡವೆರೆದು ಲಿಂಗ ಶರಣೈಕ್ಯಸುಖಮುಖಿಗಳಾಗಿ ಒಪ್ಪುತಿರ್ದವು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ