Index   ವಚನ - 880    Search  
 
ನಿಮಗಂದಾದ ಕಾಯದ ರತಿಯ ಕದ್ದು ಸುಖಿಸುವನಲ್ಲ ಕೇಳಾ. ನಿಮಗಂದಾದ ಮನದ ರತಿಯ ಕದ್ದು ಸುಖಿಸುವನಲ್ಲ ಕೇಳಾ. ನಿಮಗಂದಾದ ಪ್ರಾಣದ ರತಿಯ ಕದ್ದು ಸುಖಿಸುವನಲ್ಲ ಕೇಳಾ. ನಿಮಗಂದಾದ ಭಾವದೊಳು ಸಕಲವನಿರಿಸಿ ನಿಃಕಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ರತಿಯೊಳು ರತಿವೆರಸಿ ನಿರುತ ಪರಿಣಾಮ ಪರವಶದೊಳೋಲಾಡುತಿರ್ದೆನು ಕಾಣಾ.