Index   ವಚನ - 881    Search  
 
ಕಾಯದ ಸುಖವ ಕಡೆಗಿಟ್ಟು ಬಂದು ಶರಣೆಂದರೆ ಕರ್ಮದಲ್ಲಿ ಮುಳುಗಿ ಹೋಗುವುದೇ ಸಹಜ. ಕರಣದ ಸುಖವ ಕಡೆಗಿಟ್ಟು ಬಂದು ಶರಣೆಂದರೆ ಸಂಸಾರ ಸಂಕಲ್ಪದಲ್ಲಿ ಮುಳುಗಿ ಹೋಗುವುದೇ ಸಹಜ. ಪ್ರಾಣದ ಸುಖವ ಕಡೆಗಿಟ್ಟು ಬಂದು ಶರಣೆಂದರೆ ವಾಯುಪ್ರಕೃತಿಯಲ್ಲಿ ಮುಳುಗಿ ಹೊಗುವುದೇ ಸಹಜ. ಭಾವದ ಸುಖವ ಕಡೆಗಿಟ್ಟು ಬಂದು ಶರಣೆಂದರೆ ಅನಿಷ್ಟಭ್ರಾಂತಿಯಲ್ಲಿ ಮುಳುಗಿ ಹೊಗುವುದೇ ಸಹಜ. ಇಂತು ಜಡಸಂಬಂಧಸುಖಮುಖಿಗಳಿಗೆ ಘನಮಹಾಲಿಂಗೈಕ್ಯವನರಿದು ಬೆರೆಯಬಾರದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.