Index   ವಚನ - 883    Search  
 
ಅಯ್ಯಾ, ನಿಮ್ಮೊಳಗಿರ್ದು ನಿಮ್ಮ ಮರೆದು ಇತರವಾದಖಿಳವನೇನೆಂದರಿಯೆ ನೋಡಾ! ಅಯ್ಯಾ, ನಿಮ್ಮೊಳಗಿರ್ದು ನಿಮಗೊಂದುವೇಳೆ ವಿಶ್ವಾಸವನರಿಯೆ, ನಿಷ್ಠೆಯನರಿಯೆ, ಸಾವಧಾನವನರಿಯೆ, ಅನುಭಾವವನರಿಯೆ, ಆನಂದವನರಿಯೆ ಸಮರಸಸುಖಲೋಲುಪ್ತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.