Index   ವಚನ - 885    Search  
 
ನೀರಗೋಳಿಯ ನೆತ್ತರವ ಕುಡಿದವನು, ಹಂಸನ ಪಾಕವನೆತ್ತ ಸೇವಿಸಬಲ್ಲ ಹೇಳಾ! ಮಿಥ್ಯಸಂಸಾರದೊಳ್ಮುಳುಗಿ ತೇಕ್ಯಾಡುವ ಅನಿತ್ಯ ಮೂಢಪ್ರಾಣಿ ತಾನೆತ್ತಬಲ್ಲುದು ಹೇಳಾ ಗುರುನಿರಂಜನ ಚನ್ನಬಸವಲಿಂಗೈಕ್ಯ ನಿಜಗಡಲಸುಖವನು?