Index   ವಚನ - 888    Search  
 
ಸುಖಮುಖಸನ್ನಿಹಿತ ಶರಣಂಗೆ ಸಕಳವನರಿದಾಗಳೆ ಅರ್ಪಿತವಹುದು. ಮಿಥ್ಯ ಸಂಭ್ರಮ ಸಂಪನ್ನತೆವಡೆದ ಸುತ್ತುಮೋಹಿಗೆತ್ತಣರ್ಪಿತವಯ್ಯಾ? ಚಿತ್ತ ಮಲ ಮುಸುಕರಿಗೆ ಸತ್ಯ ಗುರುನಿರಂಜನ ಚನ್ನಬಸವಲಿಂಗೈಕ್ಯದ ಗೊತ್ತನರಿಯಬಾರದು ಕಾಣಾ