Index   ವಚನ - 896    Search  
 
ಆಡು ಕುರಿಯ ನುಂಗಿ ಬೆಕ್ಕಿನ ಹೊಟ್ಟೆಯ ಹೊಕ್ಕಿತ್ತು, ಬೆಕ್ಕು ಕಪ್ಪೆಯ ನೆರೆದು ಬಾವಿಯ ಹಾಲು ಕುಡಿಯುತ್ತಿರಲು ಕಟವಾಯಿಂದೆ ಕ್ಷೀರ ಸುರಿದು ಭೂಮಿಯಸೋಂಕಿ ಕಾಂತಾರ ಉರಿದು ವ್ಯಾಘ್ರನಳಿಯಿತ್ತು. ಮೃಗಾದಿ ಸಕಲ ಜನಿತ ತಮ್ಮ ಸ್ಥಲವ ಬಿಟ್ಟು ನೋಡುತ್ತ ನೋಡುತ್ತ ಅಡಗಿ ಒಂದೂ ಕಾಣದ ಬಯಲ ಬೆಡಗನೇನೆಂದುಪಮಿಸುವೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ?