Index   ವಚನ - 901    Search  
 
ಅನುಭಾವವನಾವರಿಸಿ ಹೇಳುವರಂಗ ಬಾಳೆಯ ಸ್ತಂಭದಂತೆ ಮುಟ್ಟಿನೋಡುವರ ಕರ ಮನ ಕಂಗಳಿಗೆ ನಯವಾಗಿರಬೇಕು. ಕೇಳುವರ ಚಿತ್ತ ಅಚ್ಚೊತ್ತಿ ತನುಮನಾತ್ಮಾಹುತಿಯಾಗಿರ್ದ ಭಾವ ಬೆಳಗುತ್ತಿರಬೇಕು. ಶರಣತತಿದೃಷ್ಟಕ್ಕೆ ಇದೇ ನಿಜೈಕ್ಯದ ನಿಲುವು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.