Index   ವಚನ - 906    Search  
 
ಅಯ್ಯಾ, ನಿಮ್ಮ ಸಮರಸದೊಳಗಣ ಶ್ರದ್ಧೆಯಬೆಳಗಿನ ಸೊಬಗನಾರು ಬಲ್ಲರು ಹೇಳಾ! ನಿಮ್ಮ ಸಮರಸದೊಳಗಣ ನೈಷ್ಠೆಬೆಳಗಿನ ಸೊಬಗನಾರು ಬಲ್ಲರು ಹೇಳಾ! ನಿಮ್ಮ ಸಮರಸದೊಳಗಣ ಸಾವಧಾನಬೆಳಗಿನ ಸೊಬಗನಾರು ಬಲ್ಲರು ಹೇಳಾ! ನಿಮ್ಮ ಸಮರಸದೊಳಗಣ ಅನುಭಾವಬೆಳಗಿನ ಸೊಬಗನಾರು ಬಲ್ಲರು ಹೇಳಾ! ನಿಮ್ಮ ಸಮರಸದೊಳಗಣ ಆನಂದಬೆಳಗಿನ ಸೊಬಗನಾರು ಬಲ್ಲರು ಹೇಳಾ! ನಿಮ್ಮ ಸಮರಸದೊಳಗಣ ಸಮಬೆಳಗಿನ ಸೊಬಗನಾರು ಬಲ್ಲರು ಹೇಳಾ! ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಿಜದೊಳಗಿಪ್ಪ ನಿಜೈಕ್ಯಂಗಲ್ಲದೆ ಅರಿಯಬಾರದು ಕಾಣಾ.