Index   ವಚನ - 910    Search  
 
ಹಾಳೂರೊಳಗೊಂದು ಕೋಳಿ ಎದ್ದು ಕೂಗಿತ್ತು. ನೋಡಬಂದವರ ಬೆಕ್ಕು ಮುರಿಯಿತ್ತು. ನೀರೊಳಗೆ ಚಂದ್ರಮೂಡಿತ್ತು, ಮೇರುಗಿರಿಪರ್ವತಕ್ಕೆ ಬೆಳಗು ಹಬ್ಬಿದಲ್ಲಿ ನೂರೊಂದು ಕುಲ ; ಷಡುದರ್ಶನವಾಗಿ ಮೂರು ಸಿಂಹಾಸನದೊಳುನಿಂದು ಮುತ್ತಿನ ಮೇಲುಪ್ಪರಿಗೆಯೊಳಗಿಪ್ಪ ಗುರುನಿರಂಜನ ಚನ್ನಬಸವಲಿಂಗ ಪ್ರಭೆಯೊಳಗಡಗಿ ಕುರುಹಳಿದುದನೇನೆಂಬೆ.