Index   ವಚನ - 909    Search  
 
ನೀರೊಳಗಿನ ಕಿಚ್ಚೆದ್ದು ಊರೆಲ್ಲ ಸುಟ್ಟಿತ್ತು. ಕೇರಿಯೊಳಗಣ ಸೂಳೆಯರು ಗರತಿಯಾದುದನೇನೆಂಬೆನಯ್ಯಾ. ಹಾರುವನ ಕುತ್ತಿಗೆಯ ಕೊಯ್ದು ಮೇಲಣೊರತೆಯ ಉದಕವ ಹೊಯ್ದರೆ ಹಾರುವನ ಕುಲಕೋಟಿ ಸತ್ತು ಕುಣಿಕುಣಿದು ಕೂಡಿದರು ಗುರುನಿರಂಜನ ಚೆನ್ನಬಸವಲಿಂಗ ಶರಣ ಬೆಂಬಳಿವಿಡಿದು.