Index   ವಚನ - 911    Search  
 
ನಿರ್ಮಲಜಾಗ್ರದ ಬೆಳಗನರಿಯದ ವೇದಾಂತಿಯ ಸಂಗಭಂಗವನರಿಯದೆ, ನಿರುಪಮಸ್ವಪ್ನದ ಕಳೆಯನರಿಯದ ಸಿದ್ಧಾಂತಿಯ ಕೂಟಭಂಗವನರಿಯದೆ, ನಿರಂಜನಸುಷುಪ್ತಿಯ ಪ್ರಕಾಶವನರಿಯದ ಯೋಗಮಾರ್ಗಿಯ ಸಂಯೋಗ ಭಂಗವನರಿಯದೆ ಜಾಗ್ರದ ಬೆಳಗ ಸ್ವಪ್ನದಲ್ಲಿ ಕಂಡು, ಸ್ವಪ್ನದ ಕಳೆಯ ಸುಷುಪ್ತಿಯೊಳ್ಬೆರೆದು ಸುಮ್ಮನಿರ್ದ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮೊಳಗೆ ಶರಣ.