ಹಾಳೂರೊಳಗೊಂದು ಕೋಳಿ ಎದ್ದು ಕೂಗಿತ್ತು.
ನೋಡಬಂದವರ ಬೆಕ್ಕು ಮುರಿಯಿತ್ತು.
ನೀರೊಳಗೆ ಚಂದ್ರಮೂಡಿತ್ತು, ಮೇರುಗಿರಿಪರ್ವತಕ್ಕೆ
ಬೆಳಗು ಹಬ್ಬಿದಲ್ಲಿ ನೂರೊಂದು ಕುಲ ;
ಷಡುದರ್ಶನವಾಗಿ ಮೂರು ಸಿಂಹಾಸನದೊಳುನಿಂದು
ಮುತ್ತಿನ ಮೇಲುಪ್ಪರಿಗೆಯೊಳಗಿಪ್ಪ
ಗುರುನಿರಂಜನ ಚನ್ನಬಸವಲಿಂಗ ಪ್ರಭೆಯೊಳಗಡಗಿ
ಕುರುಹಳಿದುದನೇನೆಂಬೆ.
Art
Manuscript
Music
Courtesy:
Transliteration
Hāḷūroḷagondu kōḷi eddu kūgittu.
Nōḍabandavara bekku muriyittu.
Nīroḷage candramūḍittu, mērugiriparvatakke
beḷagu habbidalli nūrondu kula;
ṣaḍudarśanavāgi mūru sinhāsanadoḷunindu
muttina mēlupparigeyoḷagippa
guruniran̄jana cannabasavaliṅga prabheyoḷagaḍagi
kuruhaḷidudanēnembe.
ಸ್ಥಲ -
ಐಕ್ಯನ ಪ್ರಾಣಲಿಂಗಿಸ್ಥಲ