Index   ವಚನ - 914    Search  
 
ಮಹೇಶ್ವರತತ್ವವನರಿದ ಶರಣ ಗುರುಪ್ರಕಾಶದಲ್ಲರತು ಇಷ್ಟಲಿಂಗೈಕ್ಯ ತಾನೇ ನೋಡಾ. ಸದಾಶಿವತತ್ವವನರಿದ ಶರಣ ಲಿಂಗಪ್ರಕಾಶದೊಳರತು ಪ್ರಾಣಲಿಂಗೈಕ್ಯ ತಾನೇ ನೋಡಾ. ಶಿವತತ್ವವನರಿದ ಶರಣ ಜಂಗಮಪ್ರಕಾಶದಲ್ಲರತು ಭಾವಲಿಂಗೈಕ್ಯ ತಾನೇ ನೋಡಾ. ಇದು ಕಾರಣ, ನಿಜತತ್ವನರಿದ ಶರಣ ಗುರುನಿರಂಜನ ಚನ್ನಬಸವಲಿಂಗದಲ್ಲಿ ಲಿಂಗಾಂಗವನರಿಯದ ಪ್ರಾಣಲಿಂಗೈಕ್ಯನನೇನೆಂದುಪಮಿಸುವೆನಯ್ಯಾ.