Index   ವಚನ - 923    Search  
 
ಕರುಣೋದಕವ ಬಲ್ಲರೆ ಕಾಯಭಾವನಾಸ್ತಿಯಾಗಿರಬೇಕು. ವಿನಯೋದಕವ ಬಲ್ಲರೆ ಪ್ರಾಣನ ಪ್ರಕೃತಿನಾಸ್ತಿಯಾಗಿರಬೇಕು. ಸಮತೋದಕವ ಬಲ್ಲರೆ ಆತ್ಮಗುಣವಡಗಿರಬೇಕು. ಸ್ಪರ್ಶನೋದಕವ ಬಲ್ಲರೆ ಕಾಮವಿಕಾರದ ಸೋಂಕನಳಿದಿರಬೇಕು. ಅವಧಾರೋದಕವ ಬಲ್ಲರೆ ಅರಿಷಡ್ವರ್ಗ ಶೂನ್ಯವಾಗಿರಬೇಕು. ಆಪ್ಯಾಯನೋದಕವ ಬಲ್ಲರೆ ಷಡೂರ್ಮಿನಾಸ್ತಿಯಾಗಿರಬೇಕು. ಹಸ್ತೋದಕವ ಬಲ್ಲರೆ ಅನ್ಯರಿಗೆ ಕೈಯಾಂತು ಬೇಡದಿರಬೇಕು. ಪರಿಣಾಮೋದಕವ ಬಲ್ಲರೆ ಹುಸಿ ಕಳವು ಪರದಾರಗತಿ ನಾಸ್ತಿಯಾಗಿರಬೇಕು. ನಿರ್ನಾಮೋದಕವ ಬಲ್ಲರೆ ಷಡುವರ್ಣರಹಿತನಾಗಿಬೇಕು. ಸತ್ಯೋದಕವ ಬಲ್ಲರೆ ಮಿಥ್ಯಭಾವನಾಸ್ತಿಯಾಗಿರಬೇಕು. ಈ ಭೇದವನರಿಯದೆ ದಶವಿಧ ಪಾದೋದಕದಾಚರಣೆ- ಯೊಳಿರ್ದವರೆಂದೊಡೆ ಕರ್ಮಕತ್ತಲೆಯುಳಿದುಬಾರರು ಗುರುನಿರಂಜನ ಚನ್ನಬಸವಲಿಂಗೈಕ್ಯವೆಂಬ ಅಖಂಡ ಪಾದೋದಕದಾಲಯಕ್ಕೆ.