Index   ವಚನ - 925    Search  
 
ಚಿತ್ಕಲೆ ನೀಲಮ್ಮನವರ ಪಾದಸ್ಪರ್ಶನದಿಂದೆ ಕಾಯಶೂನ್ಯನಾದೆ. ಅಕ್ಕಮಹಾದೇವಿಗಳ ಪದಸ್ಪರ್ಶನದಿಂದೆ ಕರಣಶೂನ್ಯನಾದೆ. ನಾಗಲಾಂಬಿಕೆಯರ ಪದಸ್ಪರ್ಶನದಿಂದೆ ಪ್ರಾಣಶೂನ್ಯನಾದೆ. ಮುಕ್ತಾಯಕ್ಕಗಳ ಪದಸ್ಪರ್ಶನದಿಂದೆ ಭಾವಶೂನ್ಯನಾದೆ ಗುರುನಿರಂಜನ ಚನ್ನಬಸವಲಿಂಗದೊಳಗೆ.