Index   ವಚನ - 938    Search  
 
ಅಯ್ಯಾ, ನೀ ಮಾಡಲಾಯಿತ್ತು ನಾನು ನೀನು. ನೀ ಮಾಡಲಾಯಿತ್ತು ಶಿಷ್ಯ ಗುರು. ನೀ ಮಾಡಲಾಯಿತ್ತು ಭಕ್ತ ಲಿಂಗ. ನೀ ಮಾಡಲಾಯಿತ್ತು ಜಂಗಮ ಶರಣ. ನೀ ಮಾಡಲಾಯಿತ್ತು ಷಟ್‍ಸ್ಥಲ ತ್ರಿವಿಧಸ್ಥಲ ಏಕೋತ್ತರಸ್ಥಲ. ನೀ ಮಾಡಲಾಯಿತ್ತು ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರಸ್ಥಲ. ನಿನ್ನ ಮಾಟ ನಿಂದಲ್ಲಿ ಸಕಲ ನಿಃಕಲದೊಳಡಗಿ ನಿಃಕಲ ನಿರ್ವಯಲಾದ ನಿರುಪಮ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ನಾಮಶೂನ್ಯ.