Index   ವಚನ - 941    Search  
 
ನಡೆಗತೀತವಾದ ಘನವು ನಡೆಗಲಿತು ಬಂದುದೆನಗರಿದಾಯಿತ್ತು. ಅನುಪಮದ ನಿಲುವು ಉಪಮೆಗೆ ಬಂದುದೆನಗರಿದಾಯಿತ್ತು. ಅಪ್ರತಿಮದಾನಂದದ ಘನವು ಪ್ರತಿಕರಿಸಿಬಂದುದೆನಗರಿದಾಯಿತ್ತು. ಬೇರಾಗಿರ್ದ ಬ್ರಹ್ಮ ಭೋರನೆ ಅಂಗವಿಸಿದುದೆನಗೆ ಅರಿದಾಯಿತ್ತು. ಅಂಗಲಿಂಗವಾಗಿ ಸಂಗಸಮರಸವಾಗಿ ಬಯಲಾದುದೆನಗೆ ಅರಿದಾಯಿತ್ತು. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ಮತ್ತೆ ಅರಿದೆನೆಂಬುದೇನು ಹೇಳಾ!