Index   ವಚನ - 951    Search  
 
ಪೃಥ್ವಿಯಂಗವಾದ ಭಕ್ತನಲ್ಲಿ ಪಂಚಾಚಾರ ಸ್ವರೂಪವಾದ ಆಚಾರಲಿಂಗವು, ತಾನು ಷಡ್ವಿಧಲಿಂಗವಾಗಿ ಆ ಭಕ್ತನೊಳಗಣ ಷಡ್ವಿಧಲಿಂಗವೆರೆದ ಷಡ್ವಿಧಭಕ್ತಿಯಿಂದ ಷಡ್ವಿಧ ಶಕ್ತಿಸಮೇತ ಷಡ್ವಿಧ ಹಸ್ತಗೂಡಿ ಷಡ್ವಿಧಮುಖಮುಟ್ಟಿ ಕೈಕೊಳ್ಳುತಿರ್ದ ಸಾರಾಯದ ಸೌಖ್ಯವನು ಆ ಲಿಂಗವನು ಅಂಗ ಮನ ಪ್ರಾಣದಲ್ಲಿರಿಸಿ ಹಿಂಗದೆ ಅಭಿನ್ನ ಭಕ್ತಿಯೊಳಿರ್ಪಾತನೆ ಅಚ್ಚಭಕ್ತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.