Index   ವಚನ - 958    Search  
 
ಸ್ಥೂಲ ಸೂಕ್ಷ್ಮದಲ್ಲಿ ಭವಿತ್ವವಿರ್ದು ನೆಟ್ಟನೆ ಹೊರಗೊಳಗೆ ನಾ ಭಕ್ತನೆಂದರೆ ಹೇಗಾಗುವದು ಭಕ್ತಿ ಕಾಣಬಾರದು. ಹೇಗಾಗುವದು ಯುಕ್ತಿ ಕಾಣಬಾರದು. ಕಾಣಬಾರದ ಠಾವಿನಲ್ಲಿ ಹೂಣಿರ್ದ ಒಡವೆಯನರಸುವರಳವೆ? ಗುರುನಿರಂಜನ ಚನ್ನಬಸವಲಿಂಗಕ್ಕೆ ಮಾಟವಿಡಿದು ಮಾಡಿದರೆ ತೊರೆದಟ್ಟಿಸುವರು.