Index   ವಚನ - 959    Search  
 
ಮೂರು ಬಾವಿಯ ಮೇಲೆ ಇಷ್ಟಲಿಂಗವ ಧರಿಸಿ, ಮೂರು ಬಾವಿಯ ಮೇಲೆ ಪ್ರಾಣಲಿಂಗವ ಧರಿಸಿ, ಮೂರು ಬಾವಿಯ ಮೇಲೆ ಭಾವಲಿಂಗವ ಧರಿಸಿ, ತ್ರಿವಿಧಮುಕ್ತನೆಂದು ಬೆರಸಿ ಮಾಡಿದರೆ ಯುಕ್ತಿಶಕ್ತಿಯೊಳ್ವೆರೆದು ಅವ್ಯಕ್ತವಾಗಿ ಹೋಯಿತ್ತು. ಆ ಭಕ್ತಿ ಅಭಕ್ತಿ ಕಾಣಾ, ಗುರುನಿರಂಜನ ಚನ್ನಬಸವಲಿಂಗ ನೀವೆ ಸಾಕ್ಷಿ.