Index   ವಚನ - 961    Search  
 
ಮಾಡದಿರು ಅನಿತ್ಯಕ್ಕೆ, ಆಹುತಿಯಾಗಿ ಕುರುಹಳಿಯದು. ಮಾಡದಿರು ಅನಿತ್ಯಕ್ಕೆ, ಮನವೇದಿ ಕುರುಹಳಿಯದು. ಮಾಡದಿರು ಅನಿತ್ಯಕ್ಕೆ, ತಲೆಯಿಟ್ಟು ಕುರುಹಳಿಯದು. ಮಾಡದಿರು ನೀನಿಂದು ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತಿಯ, ನೀನಾಗಬೇಕಾದರೆ.