Index   ವಚನ - 962    Search  
 
ಭಕ್ತಿಯ ಮಾಡುವವರ ಮನವೇ ಗುರುಚರಲಿಂಗಕ್ಕೆ ಪೀಠವಾಗಿಹುದು. ಆ ಪೀಠವ ಸೆಳೆದು ತನುವಿಷಯ ಮೋಹಕ್ಕೆ ಚಾಚಿದರೆ ಕೆಡುವುದು ತ್ರಿವಿಧದ ನಿಲುವು, ಹಿಡಿವುದು ರಾಹು ಚಂದ್ರನ ಲೋಕಕ್ಕೆ ರಾವಳ. ಕಾಣಬಾರದು ಗುರುನಿರಂಜನ ಚನ್ನಬಸವಲಿಂಗವನು ನಿಮಿಷವಾದರು.