Index   ವಚನ - 970    Search  
 
ಅರಸಿಕೊಂಡಾಗಿ ಬಂದಲ್ಲಿ ಅರಿದರಿದು ಮಾಡಬೇಕು ಕಾಯದ ಕ್ರಿಯೆಯಿಂದ ಅರಿದರಿದು ಮಾಡಬೇಕು ಮನದ ಕ್ರಿಯೆಯಿಂದ, ಅರಿದರಿದು ಮಾಡಬೇಕು ಭಾವದ ಕ್ರಿಯೆಯಿಂದ. ಗುಣ ತ್ರಿವಿಧ ಈ ಭೇದವನರಿಯದೆ ಒಂದು ಕುರುಹಿಂದೆ ಜರಿದು ಲಿಂಗದಲ್ಲುಂಟೆಂದು ಗುರುವನುಳಿದು ಪರಿಪರಿಯ ಸೊಬಗನೋಲೈಸಿದರೇನು? ಬೇರುಕಿತ್ತೊಗೆದ ಮರದಂತೆ ಮುಂದೆಯಿಲ್ಲದೆ ವೃರ್ಥವಾಗುವದು. ಕೆಟ್ಟುಬೀಳುವ ಸಂಗವನು ಬಿಟ್ಟುಕಳೆಯುವುದೇ ಸ್ಥಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.