Index   ವಚನ - 971    Search  
 
ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ' ಎಂಬ ಹರವಾಕ್ಯವನರಿದು, ಲಿಂಗಾಚಾರಾದಿ ಪ್ರಾಣವಾಗಿ ಜಂಗಮನುಭಾವಪ್ರಸಿದ್ಧ ಪ್ರಮಾಣಚರಿತೆಯನರಿಯದೆ ಗೊಡ್ಡುಮಾತನೊಡ್ಡಿಕೊಂಡು ಎಡ್ಡೆಡ್ಡಿಂದೆ ವರ್ತಿಸುವ ದಡ್ಡ ಕೋಟಲೆಯ ನೋಡಾ ! ಗುರುವೆನ್ನ ಕರಸ್ಥಲದಲುಂಟೆಂದು ಇರವ ಶೋಧಿಸಿ ಜರಿದು ಹರಿದು ಹಿರಿಯರೆನಿಸಿ ಮೆರೆವ ಗುರುದ್ರೋಹಿಗಳ ನೆರೆಯಲಾಗದು ನಡೆನುಡಿಸಂಪನ್ನರು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.