ಗುರುವು ಲಿಂಗವಹನ್ನಬರ
ಕಾಯಕದಲ್ಲಿ ವಂಚನೆಯನುಳುಹಿದರೆ
ಆ ಕಾಯ ಕಿಲ್ಬಿಷಕೂಪಕ್ಕಾಹುತಿಯೆಂಬುದು ಶಿವನ ವಾಕ್ಯ.
ವಾಚಕದಲ್ಲಿ ವಂಚನೆಯನುಳುಹಿದರೆ
ಆ ವಾಚಕ ನಿರಯಬಾಧೆಯಧ್ವನಿಯೆಂಬುದು ಶಿವನ ವಾಕ್ಯ.
ಮಾನಸದಲ್ಲಿ ವಂಚನೆಯನುಳುಹಿದರೆ
ಆ ಮಾನಸ ಯಮದೂತರ ಕೋಪಾಹುತಿಯ
ಅನಾನಂದದಾಲಯವೆಂಬುದು ಶಿವನ ವಾಕ್ಯ.
ಅದುಕಾರಣ, ಆ ಕರಣತ್ರಯವು ದುರ್ವೋಚ್ಫಿಷ್ಟವಾಗಿ
ಬಿದ್ದು ಹೋದ ಪ್ರಾಣಿಗಳನು
ನೋಡಲಾಗದು ಮಾತಾಡಲಾಗದು
ಸುಜ್ಞಾನಿ ಕ್ರಿಯಾಸಂಬಂಧಿಗಳು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.