ಆಚಾರವೇ ಗುರು ವಿಚಾರವೇ ಶಿಷ್ಯನೆಂಬುದು ಸಹಜ.
ಆಚಾರವೇ ಜ್ಞಾನ ವಿಚಾರವೇ ಭಕ್ತಿ,
ಎರಡರ ಸಂಬಂಧವೇ ಘನ ಸಂಬಂಧವು.
ಈ ಸುಖಾನಂದ ಸುಧೆಯೊಳು ಚರಿಸಲರಿಯದೆ,
ಆಚಾರವ ಜರಿದು ಅವಿಚಾರಮುಖನಾದರೆ
ಸಚರಾಚರದೊಳು ನಿಂದು ಸವೆಯದಾಯಾಸವೇ
ಸಹಜ ಕಾಣಾ ಮುಂದೆ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music Courtesy:
Video
TransliterationĀcāravē guru vicāravē śiṣyanembudu sahaja.
Ācāravē jñāna vicāravē bhakti,
eraḍara sambandhavē ghana sambandhavu.
Ī sukhānanda sudheyoḷu carisalariyade,
ācārava jaridu avicāramukhanādare
sacarācaradoḷu nindu saveyadāyāsavē
sahaja kāṇā munde guruniran̄jana
cannabasavaliṅgā.