Index   ವಚನ - 983    Search  
 
ಸಂದ ಸಂಸಾರ ದಂದುಗವಳಿಯದೆ ಬಂದನೆಂತು, ಸ್ಥಲಕೆ ಸಂದನೆಂತು ಹೇಳಾ! ಉದರಾಗ್ನಿ ಬಲಿತರೆ ಕಳೆಯಲಿಲ್ಲವೆ ಮಾನಸಚತುಷ್ಟೆಯ? ನಿಲ್ಲಿಸಲಿಲ್ಲವೆ ವಾಚಕಚತುಷ್ಟೆಯ? ಖಂಡಿಸಲಿಲ್ಲವೆ ಕಾಯಚತುಷ್ಟೆಯ? ಕಾಮಾಗ್ನಿಮುಖರೆ ಬೇಕಾಗಿ ಮಾಡಿಕೊಂಡ ಬಳಿಕ ಮತ್ತೆ ನೋಡಿ ನೋಡಿ ಮರುಗುವ ಕಟು ಪಶುಪ್ರಾಣಿಗಳು ನಿಮ್ಮಾಣತೆ ಕಾಣಬಂದಿತು ಕಡೆಗಾಗಿ ಬನ್ನಿ ನಮ್ಮ ಗುರುನಿರಂಜನ ಚನ್ನಬಸವಲಿಂಗ ಸತ್ತರೂಪವಹಡೆ.