ಲೋಹದ ಕುಲವ ಕೆಡಿಸುವಂದು,
ಕೀಟನ ರೂಪವನಳಿಸುವಂದು,
ಕರ್ಪುರದ ಕುರುಹ ಖಂಡಿಸುವಂದು,
ಅಲ್ಲಿಗಲ್ಲಿಗೆ ತಂದು ಸ್ಥಾಪಿಸುವಂದು,
ನಾಮಧಾರಕರು ನೀವು ಅರಿಯಲಿಲ್ಲವೆ?
ಆದಿ ಮಧ್ಯಾವಸಾನದೆಚ್ಚರಿಕಿಲ್ಲವೆ?
ನೀ ನಿಜಗುರುವಲ್ಲವೆ?
ನೋಡಿ ಅವಧಾನಿಸಿಕೊ,
ಕೂಡಿ ಕಾಡಿದರೆ ಕುರುಹಿಂಗೆ ಹಾನಿ.
ಬಂದಂತೆ ಪರಿಣಾಮಿಸಿಕೋ.
ಗುರುತನದ ತೇಜ ಭೂಷಣದಿಂದೆ ಮರೆಯಬೇಕಾದರೆ
ಗುರುನಿರಂಜನ ಚನ್ನಬಸವಲಿಂಗ ಸೂತ್ರದಿಂದೆ.
Art
Manuscript
Music
Courtesy:
Transliteration
Lōhada kulava keḍisuvandu,
kīṭana rūpavanaḷisuvandu,
karpurada kuruha khaṇḍisuvandu,
alligallige tandu sthāpisuvandu,
nāmadhārakaru nīvu ariyalillave?
Ādi madhyāvasānadeccarikillave?
Nī nijaguruvallave?
Nōḍi avadhānisiko,
kūḍi kāḍidare kuruhiṅge hāni.
Bandante pariṇāmisikō.
Gurutanada tēja bhūṣaṇadinde mareyabēkādare
guruniran̄jana cannabasavaliṅga sūtradinde.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು