Index   ವಚನ - 984    Search  
 
ಲೋಹದ ಕುಲವ ಕೆಡಿಸುವಂದು, ಕೀಟನ ರೂಪವನಳಿಸುವಂದು, ಕರ್ಪುರದ ಕುರುಹ ಖಂಡಿಸುವಂದು, ಅಲ್ಲಿಗಲ್ಲಿಗೆ ತಂದು ಸ್ಥಾಪಿಸುವಂದು, ನಾಮಧಾರಕರು ನೀವು ಅರಿಯಲಿಲ್ಲವೆ? ಆದಿ ಮಧ್ಯಾವಸಾನದೆಚ್ಚರಿಕಿಲ್ಲವೆ? ನೀ ನಿಜಗುರುವಲ್ಲವೆ? ನೋಡಿ ಅವಧಾನಿಸಿಕೊ, ಕೂಡಿ ಕಾಡಿದರೆ ಕುರುಹಿಂಗೆ ಹಾನಿ. ಬಂದಂತೆ ಪರಿಣಾಮಿಸಿಕೋ. ಗುರುತನದ ತೇಜ ಭೂಷಣದಿಂದೆ ಮರೆಯಬೇಕಾದರೆ ಗುರುನಿರಂಜನ ಚನ್ನಬಸವಲಿಂಗ ಸೂತ್ರದಿಂದೆ.