ಸಂದ ಸಂಸಾರ ದಂದುಗವಳಿಯದೆ ಬಂದನೆಂತು,
ಸ್ಥಲಕೆ ಸಂದನೆಂತು ಹೇಳಾ!
ಉದರಾಗ್ನಿ ಬಲಿತರೆ ಕಳೆಯಲಿಲ್ಲವೆ ಮಾನಸಚತುಷ್ಟೆಯ?
ನಿಲ್ಲಿಸಲಿಲ್ಲವೆ ವಾಚಕಚತುಷ್ಟೆಯ?
ಖಂಡಿಸಲಿಲ್ಲವೆ ಕಾಯಚತುಷ್ಟೆಯ?
ಕಾಮಾಗ್ನಿಮುಖರೆ ಬೇಕಾಗಿ ಮಾಡಿಕೊಂಡ ಬಳಿಕ
ಮತ್ತೆ ನೋಡಿ ನೋಡಿ ಮರುಗುವ ಕಟು ಪಶುಪ್ರಾಣಿಗಳು
ನಿಮ್ಮಾಣತೆ ಕಾಣಬಂದಿತು ಕಡೆಗಾಗಿ ಬನ್ನಿ
ನಮ್ಮ ಗುರುನಿರಂಜನ ಚನ್ನಬಸವಲಿಂಗ
ಸತ್ತರೂಪವಹಡೆ.
Art
Manuscript
Music
Courtesy:
Transliteration
Sanda sansāra dandugavaḷiyade bandanentu,
sthalake sandanentu hēḷā!
Udarāgni balitare kaḷeyalillave mānasacatuṣṭeya?
Nillisalillave vācakacatuṣṭeya?
Khaṇḍisalillave kāyacatuṣṭeya?
Kāmāgnimukhare bēkāgi māḍikoṇḍa baḷika
matte nōḍi nōḍi maruguva kaṭu paśuprāṇigaḷu
nim'māṇate kāṇabanditu kaḍegāgi banni
nam'ma guruniran̄jana cannabasavaliṅga
sattarūpavahaḍe.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು