Index   ವಚನ - 985    Search  
 
ಭಕ್ತಿ ಜ್ಞಾನ ವೈರಾಗ್ಯ ಕ್ರಿಯಾಪೀಠಕರ್ತುಮೂರ್ತಿಯ ವರ್ತನೆಯ ಹೊತ್ತು ನಿಂದಲ್ಲಿ ಸತ್ಯಾಸತ್ಯ ವಿವೇಕಮುಖನಾಗಿರಬೇಕು. ಬಂದ ನಿಜಜ್ಞಪ್ತಿನಿಲುವನರಿದಡೆ ಸುಜ್ಞಪ್ತಿ ಮುಕುರವೆಂಬ ಹೃದಯವೊಳಗುಂಟು. ಮತ್ತೆ ನಾದವನೊರೆದು ನೋಡುವರೆ ಜ್ಞಾನಪಾದವುಂಟು. ಬಿಂದುವನೊರೆದು ನೋಡುವರೆ ಕ್ರಿಯಾಪಾದವುಂಟು. ಕಳೆಯನೊರೆದು ನೋಡುವರೆ ಚರ್ಯಾಪಾದವುಂಟು. ಆತ್ಮನನೊರೆದು ನೋಡುವರೆ ಅನಾದಿರೂಪುಂಟು. ಮತ್ತೆ ಹೀಗಿರ್ದು ಇದರ ರುಚಿಯನುಳಿದು ರೂಪವ ಹೊತ್ತುವಂದು ವಿಷಯಕೆ ಸಂದಿಸಿಕೊಂಡು ಮಾಡಿ ತೋರಿ ನಿಲಿಸಿದೆವೆನುತ ಬೇಡಿ ಕಾಡಿ ಬೇರೆ ಕೂಡೆಂದು ಸೆಳೆಸೆಳೆದು ಒಡಲ ಹೊರವ ತುಡುಗುಣಿಗಳು ಗುರುತ್ವಕ್ಕೆ ಸಲ್ಲ ಕಾಣಾ ಗುರುನಿರಂಜನ ಚೆನ್ನಬಸವಲಿಂಗಾ ನಿಮ್ಮಲ್ಲಿ.