Index   ವಚನ - 989    Search  
 
ಒಪ್ಪಿಮಾಡಿದ ಮಾಟದೊಳಗೆ ಒತ್ತೊತ್ತಿ ತಪ್ಪನರಸಲುಂಟೆ? ತಪ್ಪನರಸಿ ತಂದುತೋರಿದರೆ ಹಾನಿಯೆತ್ತಣಕೆ ನೋಡಾ! ಒಮ್ಮೆ ಶಾಂತಿ ಧರಿಸಿ ಅಹುದೆಂದು, ಒಮ್ಮೆ ಅಶಾಂತಿ ಧರಿಸಿ ಅಲ್ಲವೆಂದೊಡೆ, ಬಂಧನದ ಬರವು ಸಂದೇಹವಿಲ್ಲದ ಮುಖ್ಯರ ಸಂಬಂಧಿಸಿಕೊಂಡ ನಮ್ಮ ಗುರುನಿರಂಜನ ಚನ್ನಬಸವಲಿಂಗದ ಸ್ಥೂಲ ತತ್ವವಿಲಾಸ ನೀನಾಗಬೇಕಾದಡೆ.