Index   ವಚನ - 1002    Search  
 
ಸಾಗರದೊಳಗೊಂದು ಉಲುಹಿಲ್ಲದ ವೃಕ್ಷವು ಬೇರಿಲ್ಲದ ಕುಸುಮ ಕಾತು ವಾಸನೆಯಿಲ್ಲದ ಗಂಧ ಸೂಸದಿಪ್ಪದು ನೋಡಾ. ಐವತ್ತಾರುದೇಶದೊಳಗೆ ಆ ಸುದ್ದಿಯ ನರರು ಸುರರು ಮುನಿಗಳೆಲ್ಲ ಕೇಳಿ ಕಂಡವರಾದಲ್ಲಿ ಇವರು ಅಜನಕೊಂದವರಹುದು? ಅಲ್ಲ. ಇವರು ಹರಿಯಕೊಂದವರಹುದು? ಅಲ್ಲ. ಇವರು ರುದ್ರನ ಕೊಂದವರಹುದು? ಅಲ್ಲ. ಮತ್ತೆ ಇವರೊಂದಾಗಿ ವೃಕ್ಷದೊಳಹೊರಗೆ ಗುರುನಿರಂಜನ ಚನ್ನಬಸವಲಿಂಗವನಾರಾಧಿಸುತಿರ್ದರು.