Index   ವಚನ - 1003    Search  
 
ರಾಜ್ಯವಿರಹಿತ ರಾಜ, ರಾಜವಿರಹಿತ ರಾಜ್ಯ, ರಾಜತ್ವವಿದೇನೋ? ಊರುಗಳ ಸಂದೋಹ ಬೇರೆ ಸೀಮೆ ನಾಮಗಳು ಬೇರೆದೋರಿ, ಹಸಿಯುರಿಯೊಳಗೆ ಬೆಸಿಗೆಗೊಂಡ ಮಸಿಮನದಾಸೆಗಳ ದೆಸೆದೆಸೆಭಾವದ ಯುದ್ಧವ ನೋಡಾ. ಸೋಲು ಗೆಲುವೆಂಬ ರಣಭೂಮಿಯಲ್ಲಿ ಕಣ್ಣಿಲಿ ನೋಡಿ ಕಾಲಗೆಡುವಲ್ಲಿ ಸಕಲಾಯುಧವು ನಗುತಿರ್ದವು ನೋಡಾ. ಬದುಕು ಬದುಕಿರಿ ಕಾಲಕಾಲ ಬಂದು ನಿಂದು ಹೊಂದುವ ಭಾವ ಬೆರೆಯದೆ ಸಂದೇಹದೊಳಗೆ ಸಮಾಪ್ತಿ ನೋಡಿ ನೋಡಿ ನೋಡಿ ಗುರುನಿರಂಜನ ಚನ್ನಬಸವಲಿಂಗವಾದಡೆ.