ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ,
ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ,
ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು.
ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ,
ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು.
ಭವಿಯಸಂಪರ್ಕ ಬಿಡದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ,
ಲೋಕಲೌಕಿಕಚರಿಯ ಹರಿಯದನ್ನಕ್ಕರ,
ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು.
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು
ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ
ಮಹೇಶ್ವರನೆಂದರೆ ಅಘೋರನರಕ ತಪ್ಪದು.
Art
Manuscript
Music
Courtesy:
Transliteration
Paradhanakke icphaisuvannakkara, parastrīge mōhisuvannakkara,
paradaivava bhajisuvannakkara, parapākava kombannakkara,
parahinsegeḍadannakkara mahēśvaranenalāgadu.
Husi nāśavāgadannakkara, kaḷavu kucēṣṭeya nīgadannakkara,
upādhiyanusaraṇeya dāṭadannakkara mahēśvaranenalāgadu.
Bhaviyasamparka biḍadannakkara, vēṣagaḷḷara jaridu nūkadannakkara,
lōkalaukikacariya hariyadannakkara,
svatantratvānubhāviyāgadannakkara mahēśvaranenalāgadu.
Guruniran̄jana cannabasavaliṅgakke aṅgavendu
naṣṭabad'dharigeraguva bhraṣṭabhavigaḷigom'me
mahēśvaranendare aghōranaraka tappadu.
ಸ್ಥಲ -
ಮಹೇಶ್ವರಸ್ಥಲದ
ಉಳಿದ ವಚನಗಳು