ತನ್ನ ಕಾಲು ಹೇಸಿಕೆ, ಇತರರ ಕಾಲನರಸಿ ಜರಿವ.
ತನ್ನ ಕೈ ಹಡಿಕೆ, ಇತರರ ಕೈಯನರಸಿ ಹಳಿವ.
ತನ್ನ ಕಣ್ಣು ಕುರುಡು, ಇತರರ ಕಣ್ಣನರಸಿ ತೆಗೆವ.
ತನ್ನ ಬಾಯಿ ಹೊಲಸು, ಇತರರ ಬಾಯಿಯನರಸಿ ಬೊಗಳುವ.
ತನ್ನ ನಿಲುವೆಲ್ಲ ದುರ್ವಾಸನೆ, ಇತರರ ವಾಸನೆಯ ಭಾವಿಸುವ.
ಇಂಥ ನರಕಪ್ರಾಣಿಯ ನೆರಮನೆಯಲ್ಲಿರ್ದಡೆ ಪಾತಕ ಸೋಂಕುವುದು.
ಆ ಪಾಪಿ ಕರ್ಮಿಯನು ನಡೆನುಡಿಯೊಳು ಸುಳುಹಿಸಲಾಗದು ಸಧರ್ಮಿಗಳು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಾಣೆ.