Index   ವಚನ - 1013    Search  
 
ತಾಯಿಯೆಂದರಿಯ, ತಂಗಿಯೆಂದರಿಯ, ಅತ್ತೆ ಅತ್ತಿಗೆಯೆಂದರಿಯ, ಸೊಸೆ ನಾದುನಿ ಮಗಳೆಂದರಿಯದೆ ಕಾಮುಕಗೊಂಡು ಬಂದಯೋನಿ ನಿಂದಹೊಟ್ಟೆ ತಿಂದಮೊಲೆಯೆಂಬುದನರಿಯದೆ ಬೀಳುವ ಶುನಿ ಸೂಕರ ಮಾನವಗೆ ಮಹೇಶ್ವರನೆಂದು ಶರಣ ಸಂಬಂಧಿಸಿದರೆ ನಾಯಕ ನರಕ ತಪ್ಪದು. ಅದು ಕಾರಣ ಬಿಟ್ಟು ಕಳೆವುದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರು.