Index   ವಚನ - 1021    Search  
 
ಅಂತರಂಗವನರಿಯದ ಬಹಿರಂಗ, ಬಹಿರಂಗವನರಿಯದ ಅಂತರಂಗ, ಈ ನಡೆ ನಿಲುವುಗಳನು ಜರಿದು ನಿಂದ ಅಂತರಬಾಹ್ಯ ಬಾಹ್ಯಾಂತರಸಂಧಾನಸಂಪನ್ನಶರಣಂಗೆ ಸರಿಯೆನ್ನಬಹುದೇ ನರರುಗಳ? ಒಳಗೆಂಬುದನರಿಯರು, ಹೊರಗೆಂಬುದನರಿಯರು, ಏನು ಏನು ಏನುವನರಿಯದ ಹೀನ ಹೀನ ಹೀನ ಪಾತಕರ ತರಲಾಗದು ಗುರುಲಿಂಗಸಂಬಂಧೈಶ್ವರ್ಯದ ಮುಂದೆ ಶಿವಜ್ಞಾನಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.